Join Us on : WhatsApp

Monday, March 19, 2018

Loan Account Master

ಒಂದು ಸಂಸ್ಥೆಯು ತನ್ನಲ್ಲಿ ವಹಿವಾಟು ಮಾಡುವ ವ್ಯಕ್ತಿಗೆ ಸಾಲವನ್ನು ನೀಡುವ ಸಂದರ್ಭದಲ್ಲಿ ಮಾತ್ರ Loan Account ನಲ್ಲಿ Entry ಮಾಡಬೇಕು.
Loan Entry ಮಾಡಲು Transactions ಮೆನುದೊಳಗಿನ Loan Accounts ನಲ್ಲಿ ಬರುವ Loan Account Master ಆಯ್ಕೆ ಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ. 


Personal Loan
ಚಿತ್ರ 2

ಚಿತ್ರ 2ರಲ್ಲಿ ಯಾವ ತರನಾದ ಲೋನ್ ನೀಡುತ್ತಿದ್ದಿರಿ ಆ ಲೋನ್ ಖಾತೆಯನ್ನು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಂತೆ ಕಾಣುತ್ತದೆ.


Personal Loan
ಚಿತ್ರ 3

ಸೂಚನೆ : ಹೊಸದಾಗಿ ಲೋನ್ ಖಾತೆಯಲ್ಲಿ Entry ಮಾಡಲು
  • Tool  Barನಲ್ಲಿ ಕಾಣುವ New (Ctrl+N) ಬಟನ್ ಕ್ಲಿಕ್ ಮಾಡಬೇಕು.
  • Entry Date ಎಂಬಲ್ಲಿ Loan Entry ಮಾಡುವ ದಿನಾಂಕವನ್ನುಹಾಕಬೇಕು.
  • Loan Date ಎಂಬಲ್ಲಿ ಲೋನ್ ನೀಡುವ ದಿನಾಂಕ ಹಾಕಬೇಕು.
  • Customer A/c ಎಂಬಲ್ಲಿ ಲೋನ್ ಪಡೆಯುವ ವ್ಯಕ್ತಿಯ ಹೆಸರನ್ನು ಆಯ್ಕೆಮಾಡಿದಾಗ ಚಿತ್ರ 4ರಲ್ಲಿ ತೋರಿಸಿದಂತೆ ಕಾಣುತ್ತದೆ.
ಚಿತ್ರ 4

ಲೋನ್ ಖಾತೆಯ ಹಣ ಜಮಾ ಕೊಡುವ ವಿಧಾನ
  • ಲೋನ್ ಖಾತೆಯಿಂದ ಉಳಿತಾಯ ಖಾತೆಗೆ ವರ್ಗಾವಣೆ ಮಾಡುತ್ತಿದ್ದರೆ ಲೋನ್ ಪಡೆಯುವ ವ್ಯಕ್ತಿಯ ಉಳಿತಾಯ ಖಾತೆ ಆಯ್ಕೆಮಾಡಬೇಕು.
  • ಲೋನ್ ಪಡೆಯುತ್ತಿರುವ ವ್ಯಕ್ತಿಗೆ ಚೆಕ್ ಮೂಲಕ ಹಣ ಪಾವತಿಸಿದರೆ ಯಾವ ಬ್ಯಾಂಕಿನ ಚೆಕ್ ಕೊಡುತ್ತಿರೋ ಆ ಬ್ಯಾಂಕಿನ ಖಾತೆಯ ಹೆಸರನ್ನು ಆಯ್ಕೆಮಾಡಬೇಕು.
  • ಲೋನ್ ಪಡೆದವರಿಗೆ ನಗದು ಮೂಲಕ ಹಣ ಪಾವತಿಸುತ್ತಿದ್ದಾರೆ ಕ್ಯಾಶ್ ಅಕೌಂಟ್ ಆಯ್ಕೆಮಾಡಬೇಕು.

Personal Loan
ಚಿತ್ರ 5

  • ಚಿತ್ರ 5ರಲ್ಲಿ ತೋರಿಸದಂತೆ Loan Amount ಎಂಬಲ್ಲಿ ಲೋನ್ ಹಣವನ್ನು ನಮೂದಿಸಬೇಕು.
  • Rate Of Interest ಎಂಬಲ್ಲಿ ಬಡ್ಡಿದರವನ್ನು ಹಾಕಬೇಕು
  • Other Information ಕ್ಲಿಕ್ ಮಾಡಬೇಕು ನಂತರ ಚಿತ್ರ 6ರಂತೆ ಕಾಣುತ್ತದೆ.

Garanter
ಚಿತ್ರ 6
  • No. of Guarantor ಎಂಬಲ್ಲಿ ಎಷ್ಟು ಜನ ಗ್ಯಾರೆಂಟರ್ ಎಂಬುದನ್ನು ಹಾಕಿ ಇನ್ನೊಂದು ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು ಆಗ ಈ ಚಿತ್ರ 7 ಕಾಣುತ್ತದೆ.

Garanter
ಚಿತ್ರ 7

  • ಚಿತ್ರ 7ರಲ್ಲಿ Add ಬಟನ್ ಕ್ಲಿಕ್ ಮಾಡಬೇಕು
  • Customer Code ಎಂಬಲ್ಲಿ Enter ಮಾಡಿ ಜಾಮೀನಾದ ವ್ಯಕ್ತಿಯ ಹೆಸರನ್ನು ಹಾಕಿ oಬಟನ್ ಕ್ಲಿಕ್ ಮಾಡಿ
  • Tool Barನಲ್ಲಿ ಕಾಣುವ Save ಬಟನ್  ಅಥವಾ (Ctrl+S) ಕ್ಲಿಕ್ ಮಾಡಬೇಕು
  • ಆಗ ಚಿತ್ರ 8ರಲ್ಲಿ ತೋರಿಸಿದಂತೆ ಕಾಣುತ್ತದೆ.

Loan
ಚಿತ್ರ 8

No comments:

Post a Comment