Accounts Master: ಇದು ಖಾತೆಗಳನ್ನು ನಮೂದಿಸಲು ಉಪಯೋಗಿಸಲಾಗುವುದು ಇದರಲ್ಲಿ ಕೋಡ್, ಖಾತೆಯ ಹೆಸರು, ಖಾತೆಯ ಗುಂಪಿನ ವಿವರಗಳು  ಮುಖ್ಯವಾಗಿವೆ ಹಾಗೂ ಆಯಾ ಖಾತೆಗಳಿಗೆ ಸಂಬಂಧಿಸಿದಂತೆ ಇತರೆ ಮಾಹಿತಿಗಳನ್ನು ನಮೂದಿಸಬಹುದಾಗಿದೆ.
ಉದಾಹರಣೆಗೆ: ಯಾವುದೆ ಆದಾಯ ವೆಚ್ಚದ ಖಾತೆಗಳು, ಸ್ಥಿರಾಸ್ತಿ ಅಥವಾ ಚರಾಸ್ತಿ ಖಾತೆಗಳಿರಬಹುದು.
Account Master ಕ್ರಿಯೇಟ್ ಮಾಡಲು Master ಮೆನುವಿನಲ್ಲಿ Account Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ
|  | 
| ಚಿತ್ರ 1 | 
| ಚಿತ್ರ 2 | 
ಸೂಚನೆ: ಅಕೌಂಟ್ ಮಾಸ್ಟರ್ ಅನ್ನು ಆಯ್ಕೆ ಮಾಡಿದಾಗ ಅದು ಕೊನೆಯದಾಗಿ ಮಾಡಿದ ಖಾತೆಯು ಕಾಣುತ್ತದೆ.
ಹೊಸ ಖಾತೆ: (New) ಹೊಸ ಖಾತೆಯನ್ನು ಮಾಡಲು.
- Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
- Ledger Code ಎಂಬಲ್ಲಿ ಖಾತೆಯ ಹೆಸರು ಅಥವಾ ವ್ಯಕ್ತಿಯ ಹೆಸರನ್ನು ನಮೂದಿಸಿ.
- Ledger Group ಎಂಬಲ್ಲಿ ಕ್ಲಿಕ್ ಮಾಡಿ ಅದರ ಗ್ರೂಪ್ ಅನ್ನು ಆಯ್ಕೆಮಾಡಬೇಕು.
- ಹಾಗೂ ಒದಗಿಸಿರುವ ಇತರೆ ಮಾಹಿತಿಗಳನ್ನು ನಮೂದಿಸಬೇಕು.
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು.
ಖಾತೆ ಹುಡುಕಲು: (Find)
- Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್ ಮಾಡಬೇಕು
- ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ. ಅದರಲ್ಲಿ ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
- ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್ ಮಾಡಬೇಕು
- ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು
ಖಾತೆ ಅಳಿಸಲು: (Delete)
- ಅಳಕಿಸಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.
 
 
 
 
 
 
No comments:
Post a Comment