Join Us on : WhatsApp

Monday, March 19, 2018

Customer Account

Customer Accounts ಇದು ಕಡ್ಡಾಯವಾಗಿ ಮಾಡಬೇಕಾದ ಹಾಗೂ ಒಬ್ಬ ವ್ಯಕ್ತಿಗೆ ಒಂದೇ ಸಲ ಮಾಡಬೇಕಾದ ಕಾಯಂ ಖಾತೆಯಾಗಿದೆ. ಒಟ್ಟಾರೆ ಇದು ಆಧಾರ್ ಕಾರ್ಡ್ ಆಧಾರಿತ ಖಾತೆಯಾಗಿದೆ. 
ಈ ಖಾತೆಯ ವಿಶೇಷತೆಗಳು:
  • ಒಬ್ಬ ವ್ಯಕ್ತಿಗೆ ಸಂಬಂಧಪಟ್ಟ ಸಂಸ್ಥೆಗೆ ಬೇಕಾಗುವ ಮಾಹಿತಿಗಳನ್ನು ಸಂಗ್ರಹಿಸುವುದು. ಉದಾ: ಫೋಟೊ, ಸಹಿ, ವಿಳಾಸ, ಆಧಾರ್ ಕಾರ್ಡ್, ಎಲೆಕ್ಷನ್ ಕಾರ್ಡ್, ಮೊಬೈಲ್ ನಂಬರ್ ಇತ್ಯಾದಿ.
  • ಒಬ್ಬ ವ್ಯಕ್ತಿಯು ಯಾವ ಯಾವ ವ್ಯಕ್ತಿಗೆ ಜಾಮೀನುದಾರನಾಗಿದ್ದಾನೆ ಎಂಬುದನ್ನು ತಿಳಿಯಬಹುದು.
  • ಒಬ್ಬ ವ್ಯಕ್ತಿಯ ಎಲ್ಲಾ ಖಾತೆಗಳ ಮಾಹಿತಿ ತಿಳಿಯಬಹುದು.
ಕಸ್ಟಮರ್ ಕ್ರೀಯೆಟ್ ಮಾಡುವ ವಿಧಾನ
ಕಸ್ಟಮರ್ ಕ್ರೀಯೆಟ್ ಮಾಡಲು Master ಮೆನುವಿನಲ್ಲಿನ Customer Accounts ಅನ್ನು ಆಯ್ಕೆ ಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ  ತೋರಿಸಲಾಗಿದೆ.

ಚಿತ್ರ 1


ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Customer Account
ಚಿತ್ರ 2

ಸೂಚನೆ: ಕಸ್ಟಮರ್ ಅಕೌಂಟ್ ಅನ್ನು ಆಯ್ಕೆ ಮಾಡಿದಾಗ ಅದು ಕೊನೆಯದಾಗಿ ಮಾಡಿದ ಖಾತೆಯು ಕಾಣುತ್ತದೆ ಅಥವಾ ಖಾಲಿಯಿರುತ್ತದೆ.
ಹೊಸ ಖಾತೆ: (New) ಹೊಸ ಖಾತೆಯನ್ನು ಮಾಡಲು.
  • Tool Barನಲ್ಲಿ ಕಾಣುವ New ಬಟನ್ ಅಥವಾ  Ctrl+N ಕ್ಲಿಕ್ ಮಾಡಬೇಕು.
  • Name ಎಂಬಲ್ಲಿ ವ್ಯಕ್ತಿಯ ಹೆಸರು,Gender ಎಂಬಲ್ಲಿ ಗಂಡು /ಹೆಣ್ಣು
  • Introducer A/c ಎಂಬಲ್ಲಿ Enter ಮಾಡಿ ಪರಿಚಿತ ವ್ಯಕ್ತಿಯ ಹೆಸರು ಆಯ್ಕೆಮಾಡಬೇಕು
  • ಕೆಳಗೆ ಒದಗಿಸಿರುವ ಇತರೆ ಮಾಹಿತಿಗಳನ್ನು ನಮೂದಿಸಬೇಕು.
  • Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಬಟನ್ ಕ್ಲಿಕ್ ಮಾಡಬೇಕು.
ಖಾತೆ ಹುಡುಕಲು: (Find)
  • Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್  ಮಾಡಬೇಕು
  • ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ.
  • ಅದರಲ್ಲಿ ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
  • Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್  ಮಾಡಬೇಕು
  • ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು
  • Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್  ಮಾಡಬೇಕು
ಖಾತೆ ಅಳಿಸಲು: (Delete)
  • ಅಳಕಿಸಬೇಕಾದ  ಖಾತೆಯನ್ನು ಆಯ್ಕೆ ಮಾಡಬೇಕು.
  • Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.
ಖಾತೆಯ ಸಾರಾಂಶ ( Summary):
ಖಾತೆಯ ಸಾರಾಂಶ ಇದರಲ್ಲಿ ಮುಖ್ಯವಾಗಿ ಎರಡು ವಿಭಾಗಗಳಿವೆ 1.ವ್ಯಕ್ತಿಗತ ಮಾಹಿತಿ 2.ಖಾತೆಗಳ ಮಾಹಿತಿ
ವ್ಯಕ್ತಿಗತ ಮಾಹಿತಿ: ಕೋಡ್, ಹೆಸರು, ವಿಳಾಸ, ಊರು, ಭಾವಚಿತ್ರ, ಸಹಿ ಆಧಾರ್ ಕಾರ್ಡ್  ಹಾಗೂ ಇತ್ಯಾದಿಗಳು.
ಖಾತೆಗಳ ಮಾಹಿತಿ: ಖಾತೆಯ ವಿಭಾಗ, ಖಾತೆಯ ಕೋಡ್, ಖಾತೆಯಲ್ಲಿನ ಬಾಕಿ ಹಣ, ಇತ್ಯಾದಿಗಳು.
ಖಾತೆಯ ಸಾರಾಂಶ ನೋಡಲು ಮೇಲೆನ ಚಿತ್ರದಲ್ಲಿ ಆಯ್ಕೆಮಾಡಿರುವ ಖಾತೆಯಲ್ಲಿ Summary ಬಟನ್ ಕ್ಲಿಕ್ ಮಾಡಿದಾಗ ಈ ಕೆಳಗಿನ ಚಿತ್ರ 3ರಂತೆ ಖಾತೆಯ ಸಾರಾಂಶ ಕಾಣುತ್ತದೆ.




Summary
ಚಿತ್ರ 3

No comments:

Post a Comment