ಅಪ್ಲಿಕೇಶನ್ ವಿಂಡೊ ಕುರಿತು ಸಂಕ್ಷಿಪ್ತ ಮಾಹಿತಿ:
ಇದು ಒಂದು ಅಪ್ಲಿಕೇಶನ್ (Application) ವಿಂಡೋ ಆಗಿದ್ದು, ಇದರಲ್ಲಿ ಮುಖ್ಯವಾಗಿ ಮೆನುಬಾರ್ (ಆಯ್ಕೆಪಟ್ಟಿ), ಟೂಲ್ ಬಾರ್ ಮುಖ್ಯವಾಗಿವೆ. ಜೊತೆಗೆ ಸ್ಟೇಟಸ್ ಬಾರ್ ಇದೆ.
ಮೆನುಬಾರ್ ಇದೊಂದು ಅಪ್ಲಿಕೇಶನ್ ಅಯ್ಕೆಪಟ್ಟಿಯಾಗಿದೆ. ಬಳಕೆದಾರರು ಇದರಲ್ಲಿ ತಮಗೆ ಬೇಕಾದ ಆಯ್ಕೆಯನ್ನು ಮಾಡಿಕೊಂಡು ಕೆಲಸ ನಿರ್ವಹಿಸಬಹುದು. ಉದಾಹರಣೆ: ಖರೀದಿ ಅಥವಾ ಮಾರಾಟ ಮಾಡಲು ಬೇಕಾಗುವ ಆಯ್ಕೆ Transaction ಮೆನುನಲ್ಲಿ ಲಭ್ಯವಿರುತ್ತದೆ.
ಟೂಲ್ ಬಾರ್ ಯಾವುದೇ ಒಂದು ವಿಂಡೋದಲ್ಲಿ ಕಾರ್ಯನಿರ್ವಹಿಸಲು ಬೇಕಾಗುವ ಟೂಲ್ಸ್ ಗಳು ಟೂಲ್ ಬಾರ್ ನಲ್ಲಿ ಲಭ್ಯವಿದೆ. ಉದಾಹರಣೆ: ಹೊಸ ದಾಖಲೆಗಳನ್ನು (Records) ಹಾಕಲು ಅಥವಾ ಈ ಮೊದಲು ಹಾಕಿರುವ ದಾಖಲೆಗಳನ್ನು ತಿದ್ದುಪಡಿ ಮಾಡಲು, ದಾಖಲೆಗಳನ್ನು ಹುಡುಕಲು ಟೂಲ್ ಬಾರ್ ನಲ್ಲಿರುವ ಟೂಲ್ಸ್ ಬಟನ್ ಸಹಾಯ ಮಾಡುತ್ತದೆ.
ಸ್ಟೇಟಸ್ ಬಾರ್ ಇದು ಸಾಮಾನ್ಯವಾಗಿ ಸ್ಕ್ರೀನ್ ನ ಕೆಳಭಾಗದಲ್ಲಿದ್ದು ಲಾಗಿನ್ ಮಾಡಿದ  ಸಂಸ್ಥೆಯ ಹೆಸರು, ಆರ್ಥಿಕ ವರ್ಷ, ಲಾಗಿನ್ ಮಾಡಿದವರ ಹೆಸರು ಮತ್ತು ದಿನಾಂಕವನ್ನು ತೋರಿಸುತ್ತದೆ.
- ಚಿತ್ರ 1ರಲ್ಲಿನ ವಿಂಡೋ ಸೌಹಾರ್ದ ಅಪ್ಲಿಕೇಶನ್ ವಿಂಡೋನ ಒಳಭಾಗವಾಗಿದೆ.
- ಯಾವುದೇ ಮೆನುನಲ್ಲಿ ಕಾರ್ಯ ನಿರ್ವಹಿಸಲು ಸೌಹಾರ್ದ ಅಪ್ಲಿಕೇಶನಲ್ಲಿ ಕಾಣುವ ಮೆನುಬಾರ್ ಮೂಲಕ ಕಾರ್ಯನಿರ್ವಹಿಸಬಹುದು.
ಉದಾಹರಣೆಗೆ: Account Master, Opening Balance, Account Deposits, Account Withdrawal, Bank Transaction, Journal Voucher ಹಾಗೂ ಇತ್ಯಾದಿ.
|  | 
| ಚಿತ್ರ 1 | 
| ಚಿತ್ರ 2 | 
ಚಿತ್ರ 2 ರಲ್ಲಿ ಕಾಣುವುದು ಅಪ್ಲಿಕೇಶನ್ ಟೂಲ್ ಬಾರ್ ಆಗಿದೆ. ಹಾಗೂ ಈ ಟೂಲ್ ಬಾರಿನಲ್ಲಿ ಒಟ್ಟು 13 ಬಟನಗಳಿದ್ದು ಪ್ರತಿ ಬಟನ್ ತನ್ನದೇ ಕಾರ್ಯವನ್ನು ನಿರ್ವಹಿಸುತ್ತವೆ.ಇದನ್ನು ಮುಖ್ಯವಾಗಿ 4 ಭಾಗಗಳಾಗಿ ವಿಂಗಡಿಸಲಾಗಿದೆ.
- ಬಟನ್ 1 ರಿಂದ 4 ರವರೆಗೆ ಇರುವ ಬಟನ್ ಗಳಿಗೆ ನ್ಯಾವಿಗೇಷನ್ ಟೂಲ್ಸ್ ಎನ್ನುತ್ತೇವೆ.
- ಬಟನ್ 1 ಮೊದಲು ನಮೂದಿಸಿದ ದಾಖಲೆಯನ್ನು ನೋಡಲು ಬಳಸಲಾಗುತ್ತದೆ. (ಉದಾ: ಪುಸ್ತಕದ ೧ನೆೇ ಪೇಜಿಗೆ ಹೋಗಲು)
- ಬಟನ್ 2 ಹಿಂದಿನ ದಾಖಲೆಯನ್ನು ನೋಡಲು ಬಳಸಲಾಗುತ್ತದೆ. (ಉದಾ:34 ನೇ ಪೇಜಿನಿಂದ 35 ನೇ ಪೇಜಿಗೆ ಹೋಗಲು)
- ಬಟನ್ 3 ಮುಂದಿನ ದಾಖಲೆಯನ್ನು ನೋಡಲು ಬಳಸಲಾಗುತ್ತದೆ. (ಉದಾ: 38ನೇ ಪೇಜಿನಿಂದ 39ನೇ ಪೇಜಿಗೆ ಹೋಗಲು)
- ಬಟನ್ 4 ಕೊನೆಯ ದಾಖಲೆಯನ್ನು ನೋಡಲು ಬಳಸಲಾಗುತ್ತದೆ. (ಉದಾ: ಪುಸ್ತಕದ ಕೊನೆಯ ಪೇಜಿಗೆ ಹೋಗಲು)
- ಬಟನ್ 5 ರಿಂದ 8ರವರೆಗಿನ ಬಟನ್ ಗಳು ದಾಖಲೆಯನ್ನು ನಮೂದಿಸುವ, ತಿದ್ದುವ, ತೆಗೆದು ಹಾಕುವ, ನಕಲುಗೊಳಿಸುವ ಸಾಧನಗಳಾಗಿವೆ.
- ಬಟನ್ 5 ಇದು ಹೊಸ ದಾಖಲೆಯನ್ನು ನಮೂದಿಸಲು ಬಳಸಲಾಗುತ್ತದೆ.
- ಬಟನ್ 6 ಇದು ತಪ್ಪಾದ ದಾಖಲೆಗಳನ್ನು ತಿದ್ದಲು ಬಳಸಲಾಗುತ್ತದೆ.
- ಬಟನ್ 7 ಇದು ನಮೂದಿಸಿದ ದಾಖಲೆಗಳನ್ನು ತೆಗೆದು ಹಾಕಲು ಬಳಸಲಾಗುತ್ತದೆ.
- ಬಟನ್ 8 ಇದು ನಮೂದಿಸಿದ ದಾಖಲೆಯನ್ನು ನಕಲು ಮಾಡಲು ಬಳಸುತ್ತಾರೆ.
- ಬಟನ್ 9 ಮತ್ತು ಬಟನ್ 10 ನಮೂದಿಸಿದ ವರದಿಗಳನ್ನು ನೋಡಲು ಮತ್ತು ಮುದ್ರಿಸಲು ಬಳಸಲಾಗುತ್ತದೆ.
- ಬಟನ್ 9 ಇದು ವರದಿಗಳನ್ನು ಮುದ್ರಿಸುವ ಮೊದಲು ವೀಕ್ಷಿಸಲು ಬಳಸಲಾಗುತ್ತದೆ.
- ಬಟನ್ 10 ಇದು ವರದಿಗಳನ್ನು ಮುದ್ರಿಸಲು ಬಳಸಲಾಗುತ್ತದೆ.
- ಬಟನ್ 11 ಇದು ನಮಗೆ ಬೇಕಾದ ದಾಖಲೆಯನ್ನು ಹುಡುಕಲು ಬಳಸಲಾಗುತ್ತದೆ.
- ಬಟನ್ 12 ಮತ್ತು ಬಟನ್ 13 ಲಾಗ್ ಔಟ್ ಮತ್ತು ನಿರ್ಗಮಿಸಲು ಬಳಸಲಾಗುತ್ತದೆ.
- ಬಟನ್ 12 ಇದು ಅಪ್ಲಿಕೇಶನ್ ಲಾಗ್ ಔಟ್ ಮಾಡಲು ಬಳಸಲಾಗುತ್ತದೆ.
- ಬಟನ್ 13 ಇದು ಅಪ್ಲಿಕೇಶನ್ ದಿಂದ ಹೊರಬರಲು ಬಳಸಲಾಗುತ್ತದೆ.
 ಚಿತ್ರ 3ರಲ್ಲಿ Side Tool Bar ಅನ್ನು ತೋರಿಸಲಾಗಿದೆ ಹಾಗೂ ಪ್ರತಿ ಮೆನು ತನ್ನದೇ ಕಾರ್ಯನಿರ್ವಹಿಸುತ್ತದೆ.
 
 
 
 
 
 
No comments:
Post a Comment