ಬ್ಯಾಂಕಿನಲ್ಲಿ Loan ಪಡೆಯುವಾಗ Associate Share ಖಾತೆಯನ್ನು ಮಾಡಲಾಗುತ್ತದೆ. 
Associate Share ಅನ್ನು ಕ್ರಿಯೇಟ್ ಮಾಡಲು Master ಮೆನುದೊಳಗಿನ Deposits Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
Associate Share ಅನ್ನು ಕ್ರಿಯೇಟ್ ಮಾಡಲು Master ಮೆನುದೊಳಗಿನ Deposits Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 2ರಲ್ಲಿ Associate Share ಅನ್ನು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿನ ವಿಂಡೋದಂತೆ ಕಾಣುತ್ತದೆ.
ಸೂಚನೆ: ಅಸ್ಸೋಸಿಯೇಟ್ ಶೇರ್ ಖಾತೆಯನ್ನು ಆಯ್ಕೆ ಮಾಡಿದಾಗ ಅದು ಕೊನೆಯದಾಗಿ ಮಾಡಿದ ಖಾತೆಯು ಕಾಣುತ್ತದೆ ಅಥವಾ ಖಾಲಿಯಿರುತ್ತವೆ. 
ಹೊಸ ಖಾತೆ: (New) :- ಹೊಸ ಖಾತೆಯನ್ನು ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
- Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
- A/c Opening Date ಎಂಬಲ್ಲಿ ದಿನಾಂಕವನ್ನು ಹಾಕಬೇಕು.
- Customer A/c ಎಂಬಲ್ಲಿ Enter ಮಾಡಿ ಅಸ್ಸೋಸಿಯೇಟ್ ಶೇರ್ ಖಾತೆ ಮಾಡುವ ವ್ಯಕ್ತಿಯ ಹೆಸರನ್ನು ಆಯ್ಕೆಮಾಡಬೇಕು.
- Old Ref No ಎಂಬಲ್ಲಿ ಅವರ ಅಸ್ಸೋಸಿಯೇಟ್ ಶೇರ್ ಖಾತೆಯ ಮ್ಯಾನುವೆಲ್ ಸಂಖ್ಯೆಯನ್ನು ಹಾಕಬೇಕು.
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು .
ಖಾತೆ ಹುಡುಕಲು: (Find)
- Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್ ಮಾಡಬೇಕು
- ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ. ಅದರಲ್ಲಿ ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕಬಹುದಾಗಿದೆ.
ಖಾತೆ ಸರಿಪಡಿಸಲು: (Modify)
- ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್ ಮಾಡಬೇಕು
- ಅದಾದ ನಂತರ ನಮೂದಿಸಿದ "ಮೆನು"ನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡುವುದು ಕಡ್ಡಾಯ.
ಖಾತೆ ಅಳಿಸಲು: (Delete)
- ಅಳಕಿಸಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.
 

 
 
 
 
 
No comments:
Post a Comment