Opening Balances: ಸಂಸ್ಥೆಯು ತನ್ನ ವಹಿವಾಟುಗಳನ್ನು ಗಣಕೀಕೃತ ಮಾಡುವ ದಿನದ ಖಾತೆಗಳ ಆರಂಭಿಕ ಬಾಕಿ ನಮೂದಿಸಿಡುವುದು. ಇದರಲ್ಲಿ ದಿನಾಂಕ, ಖಾತೆಯ ವಿವರ, ಬಾಕಿ ಹಣ ಮತ್ತು ನಮೂನೆ(ಡೆಬಿಟ್/ಕ್ರೆಡಿಟ್)ಗೆ ಸಂಬಂಧಿಸಿದ ಮಾಹಿತಿಗಳು ಮುಖ್ಯವಾಗಿವೆ.
ಉದಾಹರಣೆಗೆ: ನಗದು ಬಾಕಿ, ಬ್ಯಾಂಕ ಖಾತೆಗಳ ಬಾಕಿ, ಬರತಕ್ಕಂತಹ ಖಾತೆಗಳ ಬಾಕಿ, ಕೊಡತಕ್ಕಂತಹ ಖಾತೆಗಳ ಬಾಕಿ, ಮತ್ತು ಇತ್ಯಾದಿಗಳು.   
ಸೂಚನೆ: ಒಟ್ಟಾರೆ ಇದರಲ್ಲಿ ಅಡಾವೆ ಪತ್ರಿಕೆ ಸಂಬಂಧಿಸಿದ ಖಾತೆಗಳು ಇರುತ್ತವೆ.
Opening Balance ಎಂಟರಿ ಮಾಡಲು Transactions ಮೆನುದೊಳಗಿನ Opening Transaction ನಲ್ಲಿ ಬರುವ Opening Balance ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|  | 
| ಚಿತ್ರ 2 | 
ಚಿತ್ರ 2 ರಲ್ಲಿ Entry ಮಾಡಬೇಕಾದ ಖಾತೆಯ ಗುಂಪನ್ನು ಆಯ್ಕೆಮಾಡಿದಾಗ ಚಿತ್ರ 3ರಲ್ಲಿನ ವಿಂಡೋದಂತೆ ಕಾಣುತ್ತದೆ.
ಸೂಚನೆ: ನೀವು ಆಯ್ಕೆಮಾಡಿದ ಖಾತೆಯ ಗುಂಪಿನಲ್ಲಿ ಕೊನೆಯದಾಗಿ ನಮೂದಿಸಿದ ಖಾತೆಯು ಕಾಣುತ್ತದೆ ಅಥವಾ ಖಾಲಿಯಿರುತ್ತದೆ.
ಹೊಸ ಖಾತೆ: (New) ಹೊಸ ಖಾತೆಯನ್ನು Entry ಮಾಡಲು.
- Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
- Date ಎಂಬಲ್ಲಿ Entry ದಿನಾಂಕವನ್ನು ಹಾಕಬೇಕು.
- Ledger Date ಎಂಬಲ್ಲಿ ವ್ಯವಹಾರದ ದಿನಾಂಕವನ್ನು ಹಾಕಬೇಕು.
- Amount ಎಂಬಲ್ಲಿ ಅವರ ಖಾತೆಯಲ್ಲಿರುವ ಹಣವನ್ನು ನಮೂದಿಸಬೇಕು.
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು.
ಖಾತೆ ಹುಡುಕಲು: (Find)
- Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್ ಮಾಡಬೇಕು
- ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ. ಅದರಲ್ಲಿ ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
- ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್ ಮಾಡಬೇಕು
- ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು
ಖಾತೆ ಅಳಿಸಲು: (Delete)
- ಅಳಕಿಸಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.
 

 
 
 
 
 
No comments:
Post a Comment