ಪಿಗ್ಮಿ ಖಾತೆ(Pigmy Account) : ಇದು ಒಂದು ಠೇವಣಿ ಖಾತೆಯ ಪ್ರಕಾರವಾಗಿದ್ದು ಇದರಲ್ಲಿ ಹನಿ ಹೂಡಿಕೆ ಮಾಡಬಹುದಾಗಿದೆ ಮತ್ತು ಬ್ಯಾಂಕಿನಿಂದ ನೇಮಿಸಿರುವ ಒಬ್ಬ ವ್ಯಕ್ತಿಯು (ಏಜೆಂಟ್) ಪ್ರತಿನಿತ್ಯ ಪಿಗ್ಮಿ ದಾರರ ಬಳಿಗೆ ಹೋಗಿ ಅವರು ನೀಡುವ ಹನಿ ಹೂಡಿಕೆಯನ್ನು ಪಡೆಯುತ್ತಾನೆ, ಹಾಗೂ ಇದರಲ್ಲಿ ನಿರ್ಧಿಷ್ಟ ಅವಧಿ ಮತ್ತು ನಿರ್ಧಿಷ್ಟ ಬಡ್ಡಿದರ ಮೊದಲೇ ನಿರ್ಣಯಿಸಲಾಗಿರುತ್ತದೆ.
ಸೂಚನೆ: ಅವಧಿಗಿಂತ ಮೊದಲೇ ಠೇವಣಿಯ ಹಣ ಹಿಂಪಡೆಯಬೇಕೆಂದರೆ ಸಂಸ್ಥೆಯು ನಿರ್ಭಂದಿಸಿದ ನಿಯಮಾವಳಿಗಳು ಅನ್ವಯಿಸುತ್ತವೆ.
Pigmy Account ಮಾಡಲು Master "ಮೆನು"ವಿನಲ್ಲಿ Deposits Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|  | 
| ಚಿತ್ರ 1 | 
ಚಿತ್ರ 2ರಲ್ಲಿನ ವಿಂಡೋದಲ್ಲಿ Pigmy Accounts ಅನ್ನು ಆಯ್ಕೆಮಾಡಿ Select ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.
ಸೂಚನೆ: ಪಿಗ್ಮಿ ಖಾತೆಯನ್ನು ಆಯ್ಕೆ ಮಾಡಿದಾಗ ಅದು ಕೊನೆಯದಾಗಿ ಮಾಡಿದ ಖಾತೆಯು ಕಾಣುತ್ತದೆ ಅಥವಾ  ಖಾಲಿಯಿರುತ್ತದೆ.
ಹೊಸ ಖಾತೆ: (New) ಹೊಸ ಖಾತೆಯನ್ನು ಮಾಡಲು.
- Tool Barನಲ್ಲಿ ಕಾಣುವ New ಬಟನ್ ಅಥವಾ Ctrl+N ಕ್ಲಿಕ್ ಮಾಡಬೇಕು.
- A/c Opening Date ಎಂಬಲ್ಲಿ ದಿನಾಂಕವನ್ನು ಹಾಕಬೇಕು
- Customer A/c Code ಎಂಬಲ್ಲಿ Entry ಪಿಗ್ಮಿ ಖಾತೆ ಮಾಡುವ ವ್ಯಕ್ತಿಯ ಹೆಸರನ್ನು ಆಯ್ಕೆಮಾಡಬೇಕು.
- Old Ref. No ಎಂಬಲ್ಲಿ ಅವರ ಮ್ಯಾನುವಲ್ ಪಿಗ್ಮಿ ಖಾತೆಯ ಸಂಖ್ಯೆಯನ್ನು ಹಾಕಬೇಕು.
- Rate Of Interest ಎಂಬಲ್ಲಿ ಕ್ಲಿಕ್ ಮಾಡಿ ಪಿಗ್ಮಿ ಖಾತೆಗೆ ಕೊಡಬೇಕಾದ ಬಡ್ಡಿದರವನ್ನು ಹಾಕಬೇಕು
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಿ.
ಖಾತೆ ಹುಡುಕಲು: (Find)
- Tool Barನಲ್ಲಿ ಕಾಣುವ Find ಬಟನ್ ಅಥವಾ Ctrl+F ಕ್ಲಿಕ್ ಮಾಡಬೇಕು
- ಅದಾದ ನಂತರ ನಿಮಗೆ ಒಂದು ಆಯ್ಕೆ ಪಟ್ಟಿಯ ವಿಂಡೋ ಕಾಣುತ್ತದೆ.
- ನಿಮಗೆ ಬೇಕಾದ ಖಾತೆಯ ಹೆಸರು ಬರೆದು ಹುಡುಕ ಬಹುದಾಗಿದೆ.
ಖಾತೆ ಸರಿಪಡಿಸಲು: (Modify)
- ತಿದ್ದುಪಡಿ ಮಾಡಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Edit ಬಟನ್ ಅಥವಾ Ctrl+E ಕ್ಲಿಕ್ ಮಾಡಬೇಕು
- ಅದಾದ ನಂತರ ನಮೂದಿಸಿದ ಮೆನುನಲ್ಲಿ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಂಡು
- Tool Barನಲ್ಲಿ ಕಾಣುವ Save ಬಟನ್ ಅಥವಾ Ctrl+S ಕ್ಲಿಕ್ ಮಾಡಬೇಕು
ಖಾತೆ ಅಳಿಸಲು: (Delete)
- ಅಳಕಿಸಬೇಕಾದ ಖಾತೆಯನ್ನು ಆಯ್ಕೆ ಮಾಡಬೇಕು.
- Tool Barನಲ್ಲಿ ಕಾಣುವ Delete ಬಟನ್ ಅಥವಾ Ctrl+D ಕ್ಲಿಕ್ ಮಾಡಬೇಕು.
 
 
 
 
 
 
No comments:
Post a Comment